ವರ್ಕ್ ಫ್ರಮ್ ಹೋಮ್
ವರ್ಕ್ ಫ್ರಂ ಹೋಮ್ ಮುಖಾಂತರ ಎಲ್ಲಾ ಶಿಕ್ಷಕ ಬಾಂಧವರಿಗೆ ಮಾನ್ಯ ಅಪರ ಆಯುಕ್ತರು ಕಲಬುರಗಿ ಇವರು 10 ಚಟುವಟಿಕೆಗಳನ್ನು ನೀಡಿರುತ್ತಾರೆ 10 ಚಟುವಟಿಕೆಗಳು ನಾವೆಲ್ಲರೂ ಚಾಚೂತಪ್ಪದೆ ಮಾಡುತ್ತೇವೆ, 10 ಚಟುವಟಿಕೆಗಳು ಈ ಕೆಳಕಂಡಂತಿರುತ್ತವೆ.
1. ಬೋಧಿಸುವ ವಿಷಯಗಳ ಆಡಿಯೋ-ವೀಡಿಯೋ ರಚನೆ
2. ಪ್ರತಿ ಪಾಠಕ್ಕೆ ಘಟಕ ಯೋಜನೆ
3. ದಿನಾಲು ಕನಿಷ್ಠ ಮೂರು ವಿದ್ಯಾರ್ಥಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಪಾಠದ ಬಗ್ಗೆ ಮಾಹಿತಿ ಹಾಗೂ ದಾಖಲೀಕರಣ
4. ಯೂಟ್ಯೂಬ್ ಮೂಲಕ ಕನಿಷ್ಠ 20 ವಿಡಿಯೋ ನೋಡಿ ದಾಖಲೀಕರಣ ಮಾಡಿಕೊಳ್ಳುವುದು.
5. ತಮ್ಮ ತಮ್ಮ ವಿಷಯಕ್ಕೆ ಸಂಬಂಧಿಸಿದಂತೆ ಕನಿಷ್ಠ ಹತ್ತು ಕಲಿಕೋಪಕರಣಗಳ ರಚನೆ.
6. ತಮ್ಮ ವಿಷಯದ ಸಹೋದ್ಯೋಗಿಯೊಂದಿಗೆ ಸಂಪರ್ಕಿಸಿ ವಿಷಯ ಮಹತ್ವದ ಕುರಿತು ಒಂದು ಕಿರು ಟಿಪ್ಪಣಿ ರಚನೆ.
7. ಸೇತುಬಂಧದ ದಾಖಲೆ ನಿರ್ವಹಣೆ ಅದರ ಜೊತೆಗೆ ಪೂರ್ವ ಪರೀಕ್ಷೆಯ ಪ್ರಶ್ನೆ ಪತ್ರಿಕೆ ತಯಾರಿ.
8. ತಮ್ಮ ವಿಷಯದ ಕುರಿತು ರಸಪ್ರಶ್ನೆ ನಡೆಸಲು ಸುಮಾರು ಒಂದುನೂರು ಪ್ರಶ್ನೆಗಳನ್ನು ಒಳಗೊಂಡ ಪ್ರಶ್ನಾಕೋಟಿ ರಚಿಸುವುದು.
9. ವರ್ಕ್ ಫ್ರಂ ಹೋಮ್ ಅಡಿಯಲ್ಲಿ ಮನೆಯಿಂದಲೇ ಕಾರ್ಯನಿರ್ವಹಿಸಿದ ಕುರಿತು ವೃತ್ತಿ ನೈಪುಣ್ಯತೆಗೆ ಸಂಬಂಧಿಸಿದಂತೆ ನಾಲ್ಕುನೂರು ಪದಗಳು ಮೀರದಂತೆ ಒಂದು ಲೇಖನ ಬರೆಯುವುದು.
10. ಕೋವಿಡ್-19 ಪರಿಸ್ಥಿಯಲ್ಲಿ ಮಕ್ಕಳ ಕಲಿಕೆ ಉತ್ಕೃಷ್ಟ ಗೊಳಿಸುವಲ್ಲಿ ಕಾರ್ಯತಂತ್ರಗಳನ್ನು ಪಟ್ಟಿಮಾಡುವುದು.

